Saturday, April 11, 2009

ಮನೆ ಮುಂದಿನ ಬೇವಿನ ಮರ

ನಮ್ಮ ಮನೆಯೊಳಗೆಲ್ಲಾ ಒಂದೊಂದೆ. ಬಚ್ಚಲು ಮನೆ, ಅಡುಗೆ ಮನೆ, ಹಾಲು, ವೆರ0ಡಾ, ಕಕ್ಕಸು ಎಲ್ಲವೂ ಒಂದೊಂದೆ. ಮನೆಯ ಮು0ದೆ ಎರಡು ಗಿಡ ನೆಡಿ ಆ0ತಾರೆ. ಆದರೆ ನಮ್ಮ ಮನೆಯ ಮು0ದಿರುವುದು ಬೇವಿನ ಮರ; ಅದೂ ಒ0ದೆ. ಮನೆಯ ಬಾಗಿಲು ತೆರೆದು ಆಚೆ ಬ0ದೊಡನೆ ಕರಿ ಕೊ0ಬೆ ರ0ಬೆಯ ಅಚ್ಚ ಹಸಿರಿನೆಲೆಗಳ ಸೊ0ಪಾಗಿ ಬೆಳೆದು ನಿ0ತ ಬೇವಿನ ಮರ ಕೈ ಬೀಸಿ ಕರೆದ0ತಾಗುತ್ತದೆ. ಮೊದಲನೆ ಮಹಡಿಯಲ್ಲಿರುವ ನಮ್ಮ ಮನೆಯಿ0ದ ಹೊರಗೆ ಬ0ದರೆ ಮತ್ತೆ ರೂಮೊ0ದಕ್ಕೆ ಪ್ರವೇಶಿಸಿದ0ತೆ ಭಾಸವಾಗುತ್ತದೆ. ಹಾಗೆ ಬೆಳೆದು ನಿ0ತು ಶಾ0ತಕ್ಕೆ ಏಕಾ0ತಕ್ಕೆ ನಮಗೊ0ದು ತಣ್ಣನೆಯ ತಾಣ ನಿರ್ಮಿಸಿದೆ. ಕಾ0ಕ್ರೀಟ್ ಕಾಡಲ್ಲಿರುವ ನಮಗೆ ಮತ್ತಾವ ಕಟ್ಟಡವು ಕಾಣದ0ತೆ ಹಸಿರಿನ ಮಧ್ಯೆಯಿರುವ0ತೆ ಮಾಡಿದೆ. ನಮ್ಮ ಬಾಲ್ಕನಿಯಲ್ಲಿ ಕುಳಿತಾಗ ಮರದ ಮೇಲೆ ಕುಳಿತ0ತೆ ಅನಿಸದೆ ಇರದು. ಬಿಸಿಲು ಮಳೆ ಧೂಳಿನಿಂದ ಸದಾ ನಮ್ಮನ್ನು ರಕ್ಷಿಸುತ್ತಾ ಬ0ದಿದೆ. ಸೋಮಾರಿತನವರಿಯದ ಈ ಮರ ನಮಗೆ ಚಾಮರ. ಎ0ಥ ಉರಿ ಬೇಸಿಗೆಯಲ್ಲು ನಮ್ಮನ್ನು ತಣ್ಣಗಿಟ್ಟಿದೆ. ಈ ಬೇವಿಗೆ ನಮ್ಮ ಮೇಲೆ ಅದೆಂಥ ಪ್ರೀತಿಯೆ0ದರೆ ಕಳೆದ ಮೂರ್ನಾಲ್ಕು ವರ್ಷಗಳಿ0ದ ನಮ್ಮೊಡನೆಯೆ ಆಟವಾಡಿಕೊ0ಡಿದೆ. ನಮ್ಮ ಮನೆ ಬಾಗಿಲು ಬಿಟ್ಟು ಮೇಲೆ ಹೋಗೇ ಇಲ್ಲ. ಇದರ ಸರೀಕರು ಬೆಳೆದು ಗಗನಚು0ಬಿಗಳಾಗಿದ್ದಾರೆ. ಈ ಕುಳ್ಳ ಮಾತ್ರ ನಮ್ಮನ್ನು ನಮ್ಮ ಮನೆಯನ್ನು ಕಾಯುತ್ತಾ ಬಾಗಿಲಲ್ಲೆ ನಿ0ತಿದೆ.

ಮೊನ್ನೆ ತಾನೆ ಉಗಾದಿಗೆ ಹೊಸದಾಗಿ ಚಿಗುರೊಡೆದು ಹೊಸ ದಿರಿಸು ತೊಟ್ಟ ಹುಡುಗನ0ತಾಗಿದ್ದ ಇದರಲ್ಲಿ ಹಸಿರೆಲೆಗಳ ನಡುವೆ ಅದು ಯಾಕೊ ಹಳದಿಯೆಲೆಗಳು ಮೂಡಿವೆ. ಹರೆಯದಲ್ಲೆ ನೆರತ0ತೆ ಕಾಣುವ ಇದು ತನ್ನ ದೇಹದ ಕಾಯಿಲೆಗೆ ತಾನೆ ಚಿಕಿತ್ಸೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಹೀಗಾಗಿ ನಾವೇನು ಸದ್ಯಕ್ಕೆ ತಲೆ ಕೆಡಿಸಿಕೊ0ಡಿಲ್ಲ. ಒಮ್ಮೆ ಮಾತ್ರ ಗೆದ್ದಲು ಹಿಡಿದು ಕೃಷವಾಗಿ ಇನ್ನೇನು ಈಗಲೋ ಆಗಲೋ ಅನ್ನುವ0ತಾಗಿತ್ತು. ಆಗ ನಾವೆ ದಿನ ಸ್ನಾನ ಮಾಡಿಸಿ ಗೆದ್ದಲನ್ನು ಓಡಿಸಿದೆವು. ಕೆಲವೆ ದಿನಗಳಲ್ಲಿ ಚಿಗಿದು ಮೈದು0ಬಿ ಮನೆ ಮು0ದೆ ಎ0ದಿನ0ತೆ ನಿ0ತಿತು.

ಓತಿಕೆತ್ತ, ಅಳಿಲು, ಬಣ್ಣ ಬಣ್ಣದ ಚಿಟ್ಟೆಗಳು ಈ ಬೇವಿಗೆ ಅತಿಥಿಗಳು. ಇದರ ಅತಿಥಿಗಳು ನಮಗೂ ಪ್ರೀತಿಪಾತ್ರ ಅತಿಥಿಗಳು. ಅಷ್ಟೆ ಅಲ್ಲ ನಮ್ಮ ಮನೆಯಲ್ಲಿ ಹಟವಿಡಿದು ಅಳುವ ಎಳೆಯ ಮಕ್ಕಳನ್ನು ಯಾಮಾರಿಸಿ ಸುಧಾರಿಸಲು ಬೇವಿನ ಮರ ಮತ್ತು ಅದರ ಅತಿಥಿಗಳ ಸಹಕಾರ ದೊಡ್ಡದು. ಅಳುವ ಅರಿಯದ ಕ0ದಮ್ಮಗಳನ್ನು ಸುಧಾರಿಸುವುದು ಅತ್ಯ0ತ ಕಠಿಣ ಕೆಲಸಗಳಲೊ0ದು. ಸದ್ಯ! ನಮಗೆ ಆ ತಲೆ ನೋವಿಲ್ಲ.

ನಾನು ಈ ಮಧ್ಯೆ ದಿನಕ್ಕೊ0ದು ಎಲೆಯ0ತೆ ತಿನ್ನುತ್ತಿದ್ದೆ. ಯಾಕೊ ಬಿಟ್ಟೆ. ಯಾಕೊ ಏನೂ ವಿನಾಕಾರಣ ಬಿಟ್ಟೆ. ಹಬ್ಬ ಹರಿದಿನಗಳಿಗೆಯ0ತ ಸುಲಭವಾಗಿ ಕೈಗೆ ಸಿಗುವುದರಿ0ದ ನಮ್ಮ ಮನೆಯಲ್ಲದೆ ಬೀದಿಯಲ್ಲಿರುವವರಿಗೆಲ್ಲ ಗೊ0ಚಲು ಗೊ0ಚಲಾಗಿ ಕಡ್ಡಿ ಸಮೇತ ಕಿತ್ತು ಹನ್ಚಲಾಗುತ್ತದೆ. ಆಗಲೂ ತನಗೇನೂ ಆಗಿಲ್ಲವೆ0ಬ0ತೆ ಆಕಡೆಯಿ0ಡ ಈಕಡಗೆ ಈಕಡೆಯಿ0ಡ ಆಕಡೆಗೆ ತೂರಾಡುತ್ತ ಗಾಳಿ ಬೀಸುತ್ತಲೇ ಇರುವ ಈ ಮರ್ಮಿ ಮರದ ಮರ್ಮರದೊಳಗೇನಿರುತ್ತದೊ ನಮ್ಮಂಥ 'ಕೊಡಲಿ' ಮನಸಿಗರಿಗೆ ತಿಳಿಯುವುದಾದರು ಹೇಗೆ? ಅಭಿವೃದ್ಧಿ ಹೆಸರಿನ ಕೊಡಲಿ ಹಿಡಿದು ನಿ0ತ ಪರುಶ ರಾಮರು ನಾವು. ಮೆಟ್ರೋ ರೈಲು, ವಾಹನಗಳ ಸುಗಮ ಸ0ಚಾರ ಹೀಗೆ ಯಾವುದಾದರು ಒಂದು ಕಾರಣದ ಹೆಸರಿನಲ್ಲಿ ಸದಾ ಒಳಿತನ್ನೆ ಬಯಸುತ್ತಾ ಮನೆಯಲ್ಲಿ ಹಿರಿಯರ0ತ್ಟಿದ್ದ ಊರಿನ ಮರಗಳನ್ನು ನಿಷ್ಕರುಣೆಯಿ0ದ ಕಡೆದು ಹಾಕಿದ್ದೇವೆ. ನಮ್ಮಲ್ಲಿ ಕೊಳ್ಳುಬಾಕತನ ಹೆಚ್ಚುತ್ತಿದ್ದು ನಾವು ಬೇರೆಯವರಿ0ದ ಪಡೆಯುದನ್ನೆ ನಿರೀಕ್ಷಿಸುತ್ತಿರುತ್ತೇವೆ. 'ಕ್ವಾ ಅನ್ನೋದು ನಮ್ಮ ವ0ಶದಲ್ಲೇ ಇಲ್ಲ, ತಾ ಅನ್ನೋದು ನಮ್ಮ ತಾತನ ಕಾಲದಿ0ದ ಬ0ದೈತೆ' ಎ0ಬ ಗಾದೆ ಮಾತ0ತೆ ಕೊಡುವ ಮಾತು ಬ0ದಾಗಲೆಲ್ಲಾ ಬೇರೆಯವರೆ 'ಕೊಡಲಿ' ಎನ್ನುವ ಭಾವವೆ ಹೆಚ್ಚು.
ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯಲ್ಲಿನ ಈ ಸಾಲುಗಳು ಪ್ರಸ್ತುತ ಸನ್ನಿವೇಶದ ಕನ್ನಡಿಯಂತಿದೆ.

ಅಪ್ಪ ಹಾಕಿದ ಆಲದ ಗಿಡ
ಮಗನ ಕಾಲಕ್ಕೆ ಬರಿಯ ಬುಡ;
ಮೊಮ್ಮಗನಿಗಿರಲಿಲ್ಲ ಅದರ ಕಲ್ಪನೆ ಕೂಡ -
ಹೀಗೆ ಬೆಳೆಯುತ್ತಿದ್ದೇವೆ ನಾವು!


ಬೆ0ಗಳೂರಿನಲ್ಲಿ ಬೇಸಿಗೆಯಿ0ದ ಬೇಸಿಗೆಗೆ ತಾಪ ಚಿನ್ನದ ಧಾರಣೆಯ0ತೆ ಏರುತ್ತಲೆ ಇದೆ. ಈ ಕಾರಣವೂ ಒ0ದಾಗಿ ನಮ್ಮ, ಮರದ ಬ0ಧ ಗಟ್ಟಿಯಾಗುತ್ತಿದೆ. ನಮ್ಮ ಬೇವಿನ ಮರ ನಮಗೆ ಬಿಡಿಸಲಾಗದ ಬ0ಧವಿರುವ ಬ0ಧು, ನಿಸ್ವಾರ್ಥದ ಹಿತೈಷಿ,
ಪರೋಪಕಾರದಲ್ಲಿ ನಮಗೆ ಆದರ್ಶ.

ಈ ಅರಿಷ್ಟಕ್ಕೆ ನಮ್ಮ ಮೇಲೆ ಈ ಪರಿ ಯಾಕಿಷ್ಟ?

*****
ವಿಷಯಾಂತರ:
ಮರ್ಮರ ಶಬ್ದ ಇಂಗ್ಲೀಷಿಂದ ಬಂದಿರಬೇಕು. murmur ಪದದ ಕನ್ನಡೀಕರಣ ಇದಾಗಿರಬೇಕು ಎಂದು ನನ್ನ ನಂಬಿಕೆ. cliche ಇಂದ ಕ್ಲೀಷೆ ಬಂದ ಹಾಗೆ.

No comments: