Saturday, August 22, 2020

Your Quote ನಲ್ಲಿ ಬರೆದದ್ದು

 One liner:

ಯಾವ ನಂಟನ್ನೂ ಕಂಟು ಹಿಡಿಯುವವರೆಗೆ ಇಟ್ಕೋಬಾರದು 

*******

ಆಭಾಸದ

ಬದುಕಲಿ

ಕಂಡೊಡನೆ 

ನನಗಿವಳು 

ಖಾಸಾ ಎಂದು 

ಭಾಸವಾದಾಗ

ಎಂದೂ ಇಲ್ಲದ

ಪ್ರೀತಿ ಹುಟ್ಟಿದ್ದು ಹೀಗೆ

*****

ಮುಳುಗುವ ಮುನ್ನ ಸೂರ್ಯ ಹೇಳಿದ, 

ಸೇರಬೇಕಿದೆ 

ಪಲ್ಲಂಗ 

ಮತ್ತೊಬ್ಬ

ಕರ್ಣನ 

ಜನನಕ್ಕಾಗಿ

ಅಸಮಾನತೆಯ 

ಹನನಕ್ಕಾಗಿ 


*****


Your Quote ನಲ್ಲಿ ಬರೆದದ್ದು


ಇನ್ನೂ ಹತ್ತಿರ ಬರುವೆಯಾ? 

 ಇದು ನನ್ನ 

ನಿಡುಗಾಲದ  ನಿರೀಕ್ಷೆ 

ನಿನ್ನಿಂದಾಗಲಿ ನನ್ನ

ಭಾವಕೋಶದ ಪರೀಕ್ಷೆ 

YourQuote ನಲ್ಲಿ ಬರೆದದ್ದು

 ಅಧಿಕಾರದಿಂದ ದೂರ

ದಾಸ್ಯಕ್ಕೆ ಸ್ಥಿರ

ಎಳೆವೆಯಾದರೂ ಬಿಡದೆ

ಎಳೆದೆಳೆದುಗೈವ ಅತ್ಯಾಚಾರ

ಪುರುಷ ಸಮಾಜದ ಆಚಾರವಾದರೂ

ದೈನ್ಯತೆಯ ನಿಶ್ಯಕ್ತಿ 

ನಟನೆಯ ನುಡಿ 

ಸಕಲ ಶಕ್ತಿಯೂ ನೀನೇ

********Monday, May 11, 2020

ಕ ಕಾಗುಣಿತಾಕ್ಷರ

ಕಟಾಕ್ಷ ದೊರೆತುದೇ
ಕಾಣಿಕೆಯೆಂದು ಬಗೆದು
ಕಿನ್ನರಳಂತೆ ನಿನ್ನ ಭಾವಿಸಲು
ಕೀರ್ತಿಕೌಮುದಿ ತೋರಿದ ನಲ್ಲೆಗೆ
ಕುಸುಮಾಂಜಲಿಯಿಂದ ಅರ್ಚಿಸಿ
ಕೂರ್ಮೆಯ ಆರಾಧನೆಯಿಂದ
ಕೃತಾರ್ಥನಾಗಿರಲು ನವಿರ
ಕೆಳೆತನ ಕಳೆಗಟ್ಟಿ ಮೇಲೇರಿ
ಕೇತನದಂತೆ ಹಾರಾಡಲು
ಕೈ ಗಲ್ಲದ ಮೇಲಿರಿಸಿ ಬೆರಗಾದೆನು
ಕೊತ್ತಲ ಕಟ್ಟುವ ಆಸೆಯಿಲ್ಲ
ಕೋಟಿ ಕೋಟಲೆ ಎದುರಾದರು
ಕೌಮೋದಕಿ ಹಿಡಿದೋಡಿಸಿ
ಕಂಕಣಬದ್ಧನಾಗಿರುವೆ ನಿನ್ನ ಸಂಗಾತಿಯಾಗಿರಲು ಏಳೂ ಜನ್ಮಕೂ

Wednesday, April 29, 2020

ನಾನೆಂದರೆ ಅಲಸ್ಯವೇ
ಅಷ್ಟೊಂದು ಬಿಡುವಿಲ್ಲದೆ ಕೆಲಸವೇ
ಇಡಿಯಾಗಿ ನಿನ್ನ ಬೇಡುತ್ತಿಲ್ಲ
ದಿನಕ್ಕೆ 64ನೇ ಒಂದು ಭಾಗವಾದರೂ
ಸಿಗಬಾರದೆ ಬಿಡಿಯಾಗಿ
ಕೊರೊನ ನೆಪದಲ್ಲಂತೂ ದೂರವೇ ಸರಿದೆ
ಸೋಂಕಿತನಂತೆ ಕಂಡೆ
ನಿನ್ನ ತನುವ ಸೋಕಲು ಕಾತರಸಿ
ಸೋಲಲು ನಾನು ಸೋಲಲಿಲ್ಲ ನೀನು
ನಿನ್ನ ನಿರೀಕ್ಷೆಯಲ್ಲಿರುವಿದೆ ನನ್ನ ಜೀವನ
ಸುಳಿಯೆ ಉಳಿವೆ ಜನ್ಮ ಪಾವನ
ಸೋಲು ಹೊಸದಲ್ಲ
ಸೋಲಲ್ಲೇ ಇದ್ದವ
ಸೋಲನ್ನೇ ಗೆದ್ದವ
ಸೋಲಿನ ಶೂರ
ಸೋತವ ಸತ್ತವ
ಸ್ವರ್ಗ ಸಿಗುವುದು ಸತ್ತವಗೆ
ಸುಖ ಸುಮ್ಮಾನ ಮೆರವಣಿಗೆ
ಸ್ವರ್ಗ ಸೇರಿದ ಮೇಲೆ ನೀನ್ಯಾರೋ ನಾನ್ಯಾರೋ
ಅಲ್ಲಿವರೆಗೆ ನೀನಿರದೆ ನಾನು ಯಾರೋ?

Friday, December 13, 2019

ಆನೆಯ ಬಲಕ್ಕೆ

ಚೊಂಚನಿಗೆ ಕೈಯಾಗಿ
ಹೆಳವನಿಗೆ ಕಾಲಾಗಿ
ನಿಗಿನಿಗಿಯ ದಿನಗಳಲ್ಲಿ
ತಂಗಾಳಿಯಾಗಿ ಬಂದೆ
ಕೈ ಚೆಲ್ಲಿದ ಸ್ಥಿತಿಯಲ್ಲಿ
ಚೇತನಶೀಲವಾಗಿ
ಹಸುರಾಗಿ ಚಿಗುರಾಗಿ
ಸುಮವಾಗಿ ಅಮೃತಫಲವ
ಕಾಣಿಕೆಯಾಗಿ ನೀ ನೀಡಿದೆ
ಆ ಕಾಣಿಕೆಯ ಸೊಬಗಿಗೆ
ಗರಿಮೆಗೆ ಮತ್ತೇನು ಬೇಡದ
ಹಾಗೆ ನೀ ಮಾಡಿದೆ
ನೀನಿರದ ನನ್ನ ಪಾಡು
ಊಹೆಗೂ ನಿಲುಕದಂತಾಗಿರಲು
ಕಾರಣ ನೀನೋ ನಾನೋ ಎಂದು
ತಿಳಿಯದ ಅಜ್ಞಾನ ನನ್ನದು
ಅಜ್ಞಾನದಲ್ಲೂ ಸುಖವಿದೆಯೆಂದು
ತಿಳಿಸಿದ ಗುರುವೇ ನೀನು

Wednesday, December 11, 2019

ಲ್ಲವಿಶ್ವ ಕಂಡ ಕಂಗಳಿಗೆ
ಹೊಸ ನೋಟವೊಂದು ಮೂಡಿಹುದಲ್ಲ
ಕಿವಿಯರಿಯದ ಸವಿದನಿಯೊಂದು
ಬಿಡದೆ ಕಾಡಿದೆಯಲ್ಲ
ಬೆಳೆದ ಹೆಮ್ಮರಕ್ಕೀಗ ತಿಳಿದಿದೆ
ತನಗೆ ಬೇರಿಲ್ಲ
ಜೀವಸಲೆಯಲ್ಲಿ ಕಾಲಿಟ್ಟ ಬೇರು ಸಿಕ್ಕಿದೆ
ಅಂಟಿಸಿ ಬಾಳುವ ಕಲೆ ಗೊತ್ತಿಲ್ಲ
ಬೀಳುವ ಮರವಾದರೂ ಆಸೆಗೆ
ಮಾತ್ರ ಕೊನೆಯಿಲ್ಲ