Tuesday, December 2, 2008

ಉಳಿತಾಯ

ಇಸವಿ ಎರಡು ಸಾವಿರದ ಎoಟಿರಲಿ ಅಥವ ಸಾವಿರದ ಎoಟಿರಿಲಿ ಉಳಿತಾಯವೆಂದರೆ ಮೊದಲಿಗೆ ತಲೆಗೆ ಬರುವುದು ಹಣ. ಹಣದ ಉಳಿತಾಯ. ಗಳಿಸಿದ್ದನ್ನು ಪೂರ್ಣವಾಗಿ ಕಳೆಯದೆ ಇದ್ದುದ್ದರಲ್ಲೆ ಹಿತಮಿತವಾಗಿ ಬಳಸಿ ಸ್ವಲ್ಪ ಮಟ್ಟಿಗಾದರು ಕೂಡಿಡಬೇಕು. ಕಷ್ಟಪಟ್ಟು ಉಳಿಸಿದ್ದು ತನಗೆ ಅನಿರೀಕ್ಷಿತವಾಗಿ ಉಲ್ಕೆಗಳಂತೆರಗುವ ಕಷ್ಟಗಳಿಗೆ ನೆರವಾಗಲೆಂದು. ಮಕ್ಕಳ ವಿದ್ಯಾಭ್ಯಾಸ, ಮದುವೆ, ಪ್ರವಾಸ ಇತ್ಯಾದಿಗಳೆಂಬ ಭವಿಷ್ಯದ ನಿರೀಕ್ಷಿತ ಖರ್ಚುಗಳಿಗೂ ಕೂಡಿಡಬೇಕು. ಬಂದದ್ದನ್ನೆಲ್ಲ ನೀರಿನಂತೆ ಖರ್ಚು ಮಾಡಿ ಸ್ವಲ್ಪವೂ ಉಳಿತಾಯ ಮಾಡದ ಧೈರ್ಯಶಾಲಿಗಳಿದ್ದಾರೆ. ಅಂಥವರಿಗೆ ತಮ್ಮ ಧೈರ್ಯವೇ ಬಂಡವಾಳ. ಹಾಗಂತ ಉಳಿತಾಯ ಮಾಡುವವರೆಲ್ಲಾ ಅಧೈರಿಗಳಲ್ಲ. ಇಂದಿನ ಉಳಿತಾಯ ಮುಂದಿನ ದಿನಗಳೆಡೆಗಿನ ಚಿಂತೆಯನ್ನು ಕಡಿಮೆ ಮಾಡುತ್ತದೆ. ಏನೇ ಇರಲಿ, ಹಣ ಉಳಿತಾಯ ಮಾಡುವವರ ಮತ್ತು ಮಾಡದವರ ಇಬ್ಬರ ಭವಿಷ್ಯದ ಬದಕು ಹಸನಾಗಿರಲಿ.

ಉಳಿತಾಯ ಅಂದರೆ ದುಡ್ಡು, ಖರ್ಚು ಅಂದರೆ ದುಡ್ಡು, ಸಂಪಾದನೆ ಅಂದರೆ ದುಡ್ಡು, ಲಾಭ ಅಂದರೆ ದುಡ್ಡು, ನಷ್ಟ ಅಂದರೆ ದುಡ್ಡು ಹೀಗೆ ಹಲವಾರು ಪದಗಳನ್ನು ಕೇಳಿದೊಡನೆ ದುಡ್ಡಿನೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತೀವಿ. ಹಣದ ವಿಷಯ ಹೊರತುಪಡಿಸಿದರೆ ಮೇಲಿನ ಶಬ್ದಗಳ ಬಳಕೆ ತೀರಾ ಕಡಿಮೆ ಅಥವ ಇಲ್ಲವೇ ಇಲ್ಲವೆನ್ನಷ್ಟರ ಮಟ್ಟಿಗೆ. ದುಡ್ಡು ಎನ್ನುವುದು ನಮ್ಮನ್ನು ಎಷ್ಟು ಆಕ್ರಮಿಸಿಕೊಂಡಿದೆ ನೋಡಿ.

ನನ್ನ ಪ್ರಕಾರ ಪ್ರಮುಖವಾಗಿ ಉಳಿಸಿಕೊಳ್ಳಬೇಕಾದ್ದು ಹಣವನ್ನಲ್ಲ ಬದಲಿಗೆ ಸಮಯವನ್ನ ನಾವು ವೃತಾ ಸಮಯ ಕಳೆಯದೆ ರಚನಾತ್ಮಕವಾಗಿ ಬಳಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ. ಯಶಸ್ಸು ಸಿಕ್ಕ ಮೇಲೆ ಕೀರ್ತಿ, ಹಣ, ಜನಬಲ ತಂತಾನೆ ಬಂದಾವು, ಅಲ್ಲವೆ?

No comments: