Friday, February 1, 2008

Quarterly ಕನಸು

ನನಗೆ ಕನಸು ಬೀಳುತ್ತೆ; ಭಯಂಕರವಾಗಿ ಬೀಳುತ್ತೆ. ಆದರೆ ದುರಾದೃಷ್ಟಕ್ಕೆ ನೆನೆಪುಳಿಯೋಲ್ಲ. ಒಂದು ಕನಸಿದೆ ಅದು ತ್ರೈಮಾಸಿಕ. ತಪ್ಪದೇ ಮೂರು ತಿಂಗಳಿಗೊಮ್ಮೆ ಬರುತ್ತೆ. ಅದು ಕೆಟ್ಟ ಕನಸು. ಕೆಟ್ಟ ಅಂತ ಯಾಕಂತೀನಿ ಅಂದರೆ ನನಗೆ ಅದು ಹೆದರಿಸುವುದರಿಂದ. ಅದ್ಯಾಕೋ ಬರುತ್ತೋ ಗೊತ್ತಿಲ್ಲ ಬಂದಾಗ ಮಾತ್ರ ಹೇಳಿಕೊಳ್ಳಲು ನಾಚಿಕೆಯಾಗುವಷ್ಟು ಭಯವಾಗುತ್ತೆ. ಅಷ್ಟೊಂದೆಲ್ಲ ಸೀನಿಲ್ಲ; ಹಾಸಿಗೆ ಒದ್ದೆ ಮಾಡಿಕೊಳ್ಳುವಷ್ಟು. ಆದರೂ ಭಯ ಮಾತ್ರ ಭಯಂಕರವಾಗಿ ಆಗುತ್ತೆ. ಅದೇನು ದೇವರದೊ, ದೆವ್ವದೋ, ಮನುಷ್ಯರದೋ ಒಟ್ಟಿನಲ್ಲಿ ಯಾರ ಕನಸೋ ಗೊತ್ತಿಲ್ಲ. ಕನಸಿನಿಂದ ಹೆದರಿ ಎದ್ದ ತಕ್ಷಣ ಸ್ವಲ್ಪ ನೆನಪಿರುತ್ತೆ ಅನ್ಸುತ್ತೆ not sure. ಮತ್ತದೆ quarterly ಕನಸು ಅಂತ ಗೊತ್ತಾಗುತ್ತೆ. ಕನಸಲ್ಲಿ ನಡೆದುದೆಲ್ಲ ನಿಮಿಷಕ್ಕೆ ಮರೆತುಹೋಗುತ್ತೆ.

ನೀವು ಹೆದರಲ್ಲ ಅಂದರೆ ನನ್ನ ಅನುಭವ ಹೇಳ್ತೀನಿ. ಅದೇನಾಗುತ್ತೋ ಗೊತ್ತಿಲ್ಲ. ಸಿಕ್ಕಾಪಟ್ಟೆ ಭಯವಂತೂ ಆಗುತ್ತೆ. ಭಯವಾಗಲೂ ಕಾರಣ ಮುಂಚೆ ಹೇಳಿದ ಹಾಗೆ ನೆನಪಿಲ್ಲ. ನಿದ್ದೆಯಿಂದ ಎಚ್ಚರಿಕೆಯಾಗಿ ಕಣ್ಣು ಕೂಡ ಬಿಟ್ಟು ಮೇಲೆ ನೋಡಿದಾಗ ಕಾಣಿಸುವುದು ಅದೇ ಸೀಲಿಂಗು, surprisingly ಕನಸು ಮಾತ್ರ ಜಾರಿಯಲ್ಲಿರುತ್ತದೆ. ಭಯ ಮತ್ತೂ ಹೆಚ್ಚಾಗುತ್ತದೆ. ಸರಿ ನಮ್ಮಮ್ಮನಾದರೂ ಕರೆಯೋಣ ಅಂತ ಬಾಯಿ ತೆರೆದರೆ ದ್ವನಿಯಿಲ್ಲದೆ ಬರಿ ಗಾಳಿ ಮಾತ್ರ ಬರುತ್ತದೆ. ಹೆದರಿಕೆಗೆ ಹೃದಯ ಬಾಯಿಗೆ ಬಂದತ್ತಾಗಿದ್ದರು ಕೂಡ ತಲೆ ಕೆಲಸ ಮಾಡುತ್ತೆ. ಮಾತಾಡಕ್ಕಾಗದಿದ್ದರೇನಂತೆ ಎಂದು ಜೋರಾಗಿ "ಉಫ್ ಉಫ್" ಅಂತೀನಿ. "ಉಫ್ ಉಫ್" ಅನ್ನೋದು ಯಾರಿಗೂ ಕೇಳೋದೆ ಇಲ್ಲ. ಏನು ಪ್ರಯೋಜನವಿಲ್ಲ ಅಂತ ಗೊತ್ತಿದ್ದರು ಕೂಡ ಪ್ರತಿಬಾರಿ 'ಈ' ಕನಸು ಬಿದ್ದಾಗ "ಉಫ್ ಉಫ್" ಅನ್ನದೇ ಬಿಡೊಲ್ಲ. ಮತ್ತೆ ತಲೆ ಕೆಲಸ ಮಾಡಲು ಶುರುಮಾಡುತ್ತೆ. ಕೈಯಿಂದ ಹಾಸಿಗೆ ಅಥವ ಗೋಡೆಗೆ ಬಡಿದರೆ ಆ ಶಬ್ದಕ್ಕೆ ಯಾರಾದರೂ ಎದ್ದು ಬರಬಹುದು ಎಂದು ಕೈಯೆತ್ತಲು ಹೋದರೆ ಉಂಹೂ ಅಲ್ಲಾಡಿಸಲು ಕೂಡ ಆಗದು. ಕೈ ಹಾಳಾಗಿ ಹೋಗಲಿ ಕಣ್ಣಿಗೆ ಕಾಣುತ್ತಿರುವ ಬೆರಳನ್ನು ಕೂಡ ಸುಮ್ಮನೆ(ಅದರಿಂದ ಏನು ಉಪಯೋಗವಿಲ್ಲವೆಂದು ಗೊತ್ತಿದ್ದೂ) ಕದಲಿಸಲಾಗದು. ಏನು ಮಾಡುವುದೆಂದು ತಿಳಿಯದೆ ಭಯದಲ್ಲಿ ಒದ್ದಾಡುತ್ತಿದ್ದಾಗ ಒಮ್ಮೆಲೆ ಉಪಾಯವೊಂದು ಹೊಳೆಯಿತು. ಅದೇನೆಂದರೆ, ಬಾಯಿ ಮುಚ್ಚಿಕೊಂಡೆ ಹ್ಞೂಂಗುಡುವುದು ಸತತವಾಗಿ ಯಾರಿಗಾದರೂ ಎಚ್ಚರವಾಗುವರೆಗು. ಅಮೇಲೆ ನಮ್ಮಮ್ಮನಿಗೆ ಎಚ್ಚರವಾಗಿ ದೂರದಿಂದಲೆ ಕೂಗಿದಾಗ ಅಥವಾ ಗದರಿಸಿದಾಗ ನನಗೂ ಎಚ್ಚರಿಕೆಯಾಗುತ್ತದೆ ಮತ್ತು ಸಾಮಾನ್ಯ(?) ಸ್ಥಿತಿಗೆ 1-2 ನಿಮಿಷಗಳಲ್ಲಿ ಮರಳುತ್ತೇನೆ. ಅಲ್ಲಿಯವರೆಗೆ ಹಿಡಿದಿದ್ದ ಭಯದ 'ಭೂತ' ಬಿಟ್ಟಿರುತ್ತದೆ.
[ನಿನ್ನೆ ಇಲ್ಲಿಯವರೆಗೆ ಬರೆದು ಮನೆಗೆ ಹೋದೆ]

ರಾತ್ರಿ ಮತ್ತದೆ ಕನಸು ಅಚಾನಕ್ಕಾಗಿ. ಅದೂ ಒಂದೇ ರಾತ್ರಿಯಲ್ಲಿ ಎರಡು ಸಲ. ಹಿಂದೆಂದಿಗಿಂತ ಈ ರಾತ್ರಿ ಹೆಚ್ಚು ಬೆದರಿದ್ದೆ ಮತ್ತು ಬೆವರಿದ್ದೆ. ಸೋಜಿಗದ ಸಂಗತಿ ಎಂದರೆ ಪ್ರತಿ ಬಾರಿ ಈ ಕನಸು(?) ಕಂಡಾಗ ಈ ಎಲ್ಲ ಪ್ರಕ್ರಿಯೆಗಳು ಅಂದರೆ "ಉಫ್ ಉಫ್" ಅನ್ನುವುದು, ಕೈಕಾಲು ಅಲುಗಾಡಿಸುವ ವಿಫಲ ಯತ್ನ, ಕೊನೆಯಲ್ಲಿ ಹ್ಞೂಂ ಗುಡುವುದು ಕ್ರಮವಾಗಿ ಪುನಾರಾವರ್ತನೆಯಾಗುತ್ತದೆ. ಅಂದಹಾಗೆ ನಾನು ಕನಸಿನ ಮಧ್ಯೆ ಕಣ್ಣು ಬಿಟ್ಟು ನೋಡುವುದು ಇವೆಲ್ಲ ಭ್ರಮೆಯೊ ನಿಜವೊ ಗೊತ್ತಿಲ್ಲ.

First of all, ಇದು ಕನಸೊ ಇಲ್ಲ ವಿಚಿತ್ರ ಅನುಭವವೋ ಗೊತ್ತಿಲ್ಲ. ಕನಸು ಕಾಣೋದಾ? ಬೀಳೋದಾ? ಬರೋದಾ? ನನ್ನ ಪ್ರಕಾರ ಅನುಭವ. ಅನುಭವವೆಂದರೆ ಅನುಭವಿಸುವುದು.

ಕನಸನ್ನು "ಕನಸುವುದು" ಎಂದು ಕ್ರಿಯಾ ಪದವಾಗಿ ಲಂಕೇಶ್ ಮೊದಲ ಬಾರಿಗೆ ಬಳಸಿದ್ದಾರೆಂದು ನನ್ನ ತಿಳುವಳಿಕೆ. ಲಂಕೇಶರ ಗರಡಿಯಿಂದ ಬಂದಿರುವ ಚಂದ್ರಶೇಖರ ಆಲೂರು, ನಾಗತಿಹಳ್ಳಿ, ಬೆಳಗೆರೆ ಮತ್ತಿತ್ತರರು ಈಗ ಬಳುಸುತ್ತಿದ್ದಾರೆ.

ಕವಿ, ವಿದ್ವಾಂಸ ಎ. ಕೆ. ರಾಮಾನುಜಂ ಅವರ ಈ ಕವನ ಓದಿಕೊಳ್ಳಿ. ಖುಷಿ ಕೊಡುತ್ತೆ.

ಬುದ್ಧಿವಂತರಿಗೆ ಕನಸು ಬಿದ್ದರೆ

ಪ್ರಾಚೀನ ಚೀನಾದಲ್ಲಿ ಬುದ್ಧಿವಂತ
ಒಬ್ಬನಿಗೆ ಪ್ರತಿ ರಾತ್ರಿ
ಕನಸು
ಪ್ರತಿ ರಾತ್ರಿ ಮುಸoಬಿ
ಬಣ್ಣದ ಚಿಟ್ಟೆಯಾಗಿ ನೈದಿಲೆಯಿಂದ
ಸೇವಂತಿಗೆ
ಸೇವಂತಿಯಿಂದ ನೈದಿಲೆಗೆ
ಹಾರಿ ಹಾರಿ ಗಾಳಿಯಲ್ಲಿ ತೇಲಿದ ಹಾಗೆ
ಕನಸು.
ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡ ಹಾಗೆ

ಮನುಷ್ಯನೋ
ಚಿಟ್ಟೆಯೋ
ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು
ರಾತ್ರಿಯ ಕನಸೋ

ತಿಳಿಯದೆ ಭ್ರಮೆ ಹಿಡಿಯಿತು.

5 comments:

ಅಮರ said...

ಪ್ರಿಯ ಬಸವರಾಜು ಅವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ

Rohit Ramachandraiah said...

ಬಸವರಾಜು ರವರೆ,

ಈಗಾಗಲೆ, ಮೊದಲ ಪಟ್ಟಿಯಲ್ಲಿ ತಮ್ಮ ಬ್ಲಾಗ್ ಅನ್ನು ಸೇರಿಸಿದ್ದೇನೆ. ಸಂ. ೩೬೧.

ವಂದನೆಗಳು,
ರೋಹಿತ್.

Gururaja Narayana said...

ನಮಸ್ಕಾರ ಬಸವ ರಾಜುರವರೆ, ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು

Anonymous said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

Shubham said...

Nice post..

colors tv show list ,
bollywood upcoming movies ,
box office collection ,
hindi tv show ,
cast, Release date ,
Ek villain 2 Release date ,
Ek villain 2 cast ,
Ek villain 2 wiki ,
Total Dhamaal Release date ,
total dhamaal caat, trailer ,