Monday, September 16, 2019

ಬುದ್ದಿಯ ಮದ್ದು 


ನನ್ನ ತವರು ಮರೆತೆ
ಮರೆತು ಹೋಗುವಷ್ಟು ಇಲ್ಲಿ ಬೆರೆತೆ
ನನ್ನ ಕಣ  ಕಣದಲ್ಲೂ ಭಾರತಮಾತೆ!

ಹಸಿಕಾಳು ಒಣಕೂಳು ವಾಸಿಯಾದರೂ ಸರಿಯೇ
ನಾನು ಇರದಿರೆ ಅದು ಹಾಲು

ಇಷ್ಟಾದರೂ ನನ್ನ ಗುರುತು ಸಿಗದೆ?
ಹೆಸರ ಹೇಳಲು ನಾನೇ ಬರಲೆ?
ಥೂ.. ನಿಮ್ಮ ತಟ್ಟೆಗೆ ಬೀಳಲಿ ಜಿರಲೆ

ಇಲ್ಲಿ ಈ ದೇಶದಲ್ಲಿ ಎಲ್ಲರ ಬಾಯಿಗೂ
ಸಲೀಸಾಗಿ  ನುಗ್ಗುವೆ
ಹೊರ ಬರಬೇಕಾದರೂ ನನ್ನ ನೆನಪು
ಉಳಿಸಿ ಬರುವೆ

ನನ್ನ ತಿಂದವರ ಬಾಯಿ `ಹ'
ಒಣಗದೆ ಕೆಣಕುವ `ಹಸಿ'
ಅವರು ಕೆಂಪಾದರೂ ನಾನು `ಹಸಿರು'


ಇನ್ನಾದರೂ ಉಂಟಾ ಹೊಳೆಯದ ಬುರುಡೆಕಾಯಿ
ಬುದ್ದಿಯ ಚುರುಕಿಗೆ ಮದ್ದು ಮೆಣಸಿನಕಾಯಿ 

No comments: